ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಕಂಠಪೂರ್ತಿ ಕುಡಿದು ತೆಪ್ಪ ಹತ್ತಿದ ಮೂವರು ಯುವಕರು ನೀರುಪಾಲು

ಕೋಲಾರ : ಕಂಠಪೂರ್ತಿ ಕುಡಿದ ನಂತರ ತೆಪ್ಪದಲ್ಲಿ ತೇಲಲೆಂದು ಕೆರೆಗೆ ಇಳಿದ ಮೂವರು ಯುವಕರು ನೀರು ಪಾಲಾದ ಘಟನೆ ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆಯಲ್ಲಿ ನಡೆದಿದೆ.

ಹೌದು ಕೆರೆ ದಡದಲ್ಲಿ ಕುಳಿತು ಸಖತ್ತಾಗಿ ಎಣ್ಣೆ ಪಾರ್ಟಿ ಮಾಡಿದ ಚಿಕ್ಕವಲಗಮಾದಿ ನವೀನ್ (32) ನೇರಳೆಕೆರೆ ರಾಜೇಂದ್ರ (32) ಮೋಹನ್ (28) ತೆಪ್ಪ ಏರಿ ಕರೆಗೆ ಇಳಿದಿದ್ದಾರೆ ಈ ವೇಳೆ ತೆಪ್ಪ ಮಗುಚಿದ ಕಾರಣ ಮೂವರು ಮೃತಪಟ್ಟಿದ್ದಾರೆ.

ಇನ್ನು ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ರಕ್ಷಣೆಗೆ ಮುಂದಾದರು ಪ್ರಯೋಜನವಾಗಿಲ್ಲ. ಸದ್ಯ ಮೂವರ ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.

ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಿ.ಕೆ.ಧರಣಿ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Edited By : Manjunath H D
PublicNext

PublicNext

09/03/2022 09:23 pm

Cinque Terre

47.53 K

Cinque Terre

0

ಸಂಬಂಧಿತ ಸುದ್ದಿ