ಯಾದಗಿರಿ : ಆಕಸ್ಮಿಕವಾಗಿ ಬೆಂಕಿ ತಗುಲಿ ಧಗಧಗನೇ ಬಣವೆಯೊಂದು ಹೊತ್ತಿ ಉರಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಖಾನಾಪುರ ಯುಕೆಪಿ ಕ್ಯಾಂಪ್ ಬಳಿ ನಡೆದಿದೆ.
ರೈತ ಸಿದ್ರಾಮ ರೆಡ್ಡಿಯವರಿಗೆ ಸೇರಿದ ಜೋಳದ ಸಪ್ಪೆ ಭತ್ತದ ಮೇವು ಹಾಗೂ ತೊಗರಿ ಒಟ್ಟು ಇದ್ದು, ಏಕಾಏಕಿ ಬೆಂಕಿ ಹತ್ತಿ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಶಹಾಪುರ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಇನ್ನು ಈ ಘಟನೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
24/02/2022 04:21 pm