ಛತ್ತೀಸ್ ಗಢ : ಮನೆಯಲ್ಲಿ ಮಕ್ಕಳಿದ್ದಾರೆ ಎಂದು ಎಷ್ಟೇ ಜಾಗರೂಕತೆ ವಹಿಸಿದರು ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಛತ್ತೀಸ್ ಗಢದ ದುರ್ಗ್ ಜಿಲ್ಲೆಯ ನಯಾಪರಾ ಪಂಚಶೀಲ್ ನಗರದಲ್ಲಿ 12 ವರ್ಷದ ಮಾನವ್ ಕುಂಭಕರ್ ಎಂಬ ಬಾಲಕ ತನ್ನ ತಾಯಿಯ ಸೀರೆಯಿಂದ ಉಯ್ಯಾಲೆ ಆಟುವಾಗ ಅದೇ ಸೀರೆ ಉರುಳಾಗಿ ಬಾಲಕ ಸಾವನ್ನಪ್ಪಿದ್ದಾನೆ.
ದುರ್ಗ್ ಕೊತ್ವಾಲಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರೇ ಎಚ್ಚರ ಮಕ್ಕಳು ಆಟವಾಡುತ್ತಿದ್ದಾರೆ ಎಂದು ನಿರ್ಲಕ್ಷ್ಯಬೇಡ ನಿಗಾವಹಿಸಿ.
PublicNext
03/02/2022 09:03 am