ಹಾವೇರಿ : ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾದ ಪರಿಣಾಮ,ಲಾರಿಯಲ್ಲಿದ್ದ ಮೂವರು ಹಮಾಲರು ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೋಸರಿತ್ತಿ ಗ್ರಾಮದ ಬಳಿ ನಡೆದಿದೆ. ಜೆಸಿಬಿ ಮೂಲಕ ಲಾರಿ ಎತ್ತಿ ಮೃತದೇಹವನ್ನು ಗ್ರಾಮಸ್ಥರು ಹೊರ ತೆಗೆಯುತ್ತಿದ್ದಾರೆ.
ಆನಂದ ಎಂಬ ಹೆಸರಿನ ಇಬ್ಬರು ಹಾಗೂ ಮಂಜು ಎಂಬಾತ ಮೃತ ದುರ್ದೈವಿಗಳು. ಇಚ್ಚಂಗಿ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಮೃತರು ಯಾವ ಊರಿನವರೆಂದು ಇನ್ನೂ ತಿಳಿದಿಲ್ಲ.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
24/01/2022 05:27 pm