ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೋಣಿಗಳ ಮೇಲೆ ಬಿದ್ದ ಭಾರೀ ಗಾತ್ರದ ಕಲ್ಲು; 7 ಜನ ಸಾವು, 9 ಮಂದಿಗೆ ಗಾಯ

ಬ್ರೆಸಿಲಿಯಾ: ಜಲಪಾತವೊಂದರ ಬಳಿ ಭಾರೀ ಗಾತ್ರದ ಕಲ್ಲಿನ ಗೋಡೆ ದೋಣಿಗಳ ಮೇಲೆ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ 9 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

ಬ್ರೆಜಿಲ್ ನ ಮಿನಾಸ್ ಗೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೋ ಕಣಿವೆಯಲ್ಲಿ ಶನಿವಾರ ನಡೆದಿದೆ. ಜಲಪಾತದ ಸರೋವರದ ಕಡೆ ಹಲವು ದೋಣಿಗಳಲ್ಲಿ ಪ್ರವಾಸಿಗರು ಹೋಗಿದ್ದರು.

ಈ ಸಂದರ್ಭದಲ್ಲಿ ಜಲಪಾತದ ಕಲ್ಲಿನ ಒಂದು ಭಾಗ ಜರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿದೆ. ಇದರಿಂದಾಗಿ ಎರಡು ದೋಣಿಗಳಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ.

ಇನ್ನೂ ನೀರಿನಲ್ಲಿ ಕಾಣೆಯಾಗಿರುವ ಮೂವರ ಹುಡುಕಾಟ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

23 ಮಂದಿ ಇತರ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾರೀ ಗಾತ್ರದ ಕಲ್ಲಿನ ಭಾಗ ಮುರಿದು ಬೀಳುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ.

Edited By : Nagesh Gaonkar
PublicNext

PublicNext

09/01/2022 07:01 pm

Cinque Terre

118.84 K

Cinque Terre

2

ಸಂಬಂಧಿತ ಸುದ್ದಿ