ದಾವಣಗೆರೆ: ನಗರದ ಹೆಚ್ ಕೆ ಆರ್ ಸರ್ಕಲ್ ಹತ್ತಿರ ಮೆಡ್ ಪ್ಲಸ್ ಶಾಪ್ ಪಕ್ಕದ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಟ್ರಾನ್ಸ್ ಫಾರ್ಮರ್ ಹೊತ್ತಿ ಉರಿದಿದೆ.
ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಕಾಣಿಸಿಕೊಂಡಿತ್ತು. ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಅಲ್ಲದೇ, ಬಳಿಕ ಟ್ರಾನ್ಸ್ ಫಾರ್ಮರ್ ಗೆ ಹಾಕಿ ಕೇಬಲ್ ಗಳಿಗೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿವೆ.
ಇನ್ನೇನು ಪಕ್ಕದಲ್ಲಿಯೇ ಇದ್ದ ಕಟ್ಟಡಕ್ಕೆ ಬೆಂಕಿ ವ್ಯಾಪಿಸುವ ಸಾಧ್ಯತೆ ಕೂಡ ಇತ್ತು. ನಂತರ ಕೂಡಲೇ ಸ್ಥಳೀಯರು ಬೆಸ್ಕಾಂ ಸಿಬ್ಬಂದಿಗೆ ಮಾಹಿತಿಯನ್ನ ನೀಡಿದ್ದು, ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದ್ದಾರೆ.
PublicNext
27/12/2021 03:49 pm