ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಾವಿಗೆ ಬಂದ ಕಬ್ಬು ಬೆಂಕಿಗಾಹುತಿ : ಕಣ್ಣೀರಿಟ್ಟು ಗೋಳಾಡಿದ ರೈತ

ಚಾಮರಾಜನಗರ ಜಿಲ್ಲೆ : ಕಟಾವಿಗೆ ಬಂದಿದ್ದ 7 ಎಕರೆ ಕಬ್ಬು ವಿದ್ಯುತ್ ತಲುಲಿ ಧಗಧಗಿಸಿದ ಘಟನೆ ಚಾಮರಾಜನಗರ ತಾಲೂಕಿನ ಬಂಡೀಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಟಾವಿಗೆ ಬಂದು ಇನ್ನೇನು ಎರಡು-ಮೂರು ದಿನಗಳಲ್ಲಿ ಫಸಲು ಮಾರಾಟ ಮಾಡಬೇಕಿದ್ದ ವೇಳೆ ಜಮೀನಿನ ಮೇಲೆ ಎಳೆದಿದ್ದ ವಿದ್ಯುತ್ ಪ್ರವಹಿಸಿ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ಮನು ಎಂಬವರಿಗೆ ಸೇರಿದ 10 ಎಕರೆ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ 7 ಎಕರೆ ಫಸಲು ಸುಟ್ಟು ಭಸ್ಮವಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಎರಡು ಫೈರ್ ಎಂಜಿನ್ ಮೂಲಕ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಇದರಿಂದ ಪಕ್ಕದ ಹೊಲಗಳಿಗೂ ಹರಡಬಹುದಾದ ಬೆಂಕಿ ತಣ್ಣಗಾಗಿದೆ.

ಚೆಸ್ಕಾಂ ಸಿಬ್ಬಂದಿ ಬೇಜವಾಬ್ದಾರಿತನದಿಂದ ರೈತನ ಕೈ ಸೇರಬೇಕಿದ್ದ ಲಕ್ಷಾಂತರ ರೂ ಬೆಲೆ ಕಬ್ಬು ಬೆಂಕಿಗಾಹುತಿಯಾಗಿರುವುದಕ್ಕೆ ರೈತ ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.

Edited By : Nagesh Gaonkar
PublicNext

PublicNext

25/12/2021 10:07 pm

Cinque Terre

49.12 K

Cinque Terre

0

ಸಂಬಂಧಿತ ಸುದ್ದಿ