ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸೀದಿಯಲ್ಲಿ ಗ್ಯಾಸ್‌ ಸಿಲಿಂಡರ್ ಸ್ಪೋಟ್-ಐದಾರು ಬೈಕ್ ಸುಟ್ಟು ಕರಕಲು

ಬೆಂಗಳೂರು: ನಾಗವಾರದ ಬಳಿಯ ಮಸೀದಿಯಲ್ಲಿ ಸಿಲಿಂಡರ್ ಗ್ಯಾಸ್ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಯಪಾಯ ಆಗಿಲ್ಲ. ಆದರೆ, ಮೀನು ಮಾರಾಟದ ಅಂಗಡಿ, ಒಂದು ಬೈಕ್ ಗ್ಯಾರೇಜ್, ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ಸೇರಿ ಸುಮಾರು ಐದಾರು ಬೈಕ್ ಗಳು ಸುಟ್ಟು ಕರಕಲಾಗಿವೆ.

ಇಲ್ಲಿಯ ಉಮರ್ ಬಿನ್ ಮಸೀದಿ ಕಾಂಪ್ಲೆಕ್ಸ್ ನಲ್ಲಿಯೇ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಮಸೀದಿ ಬಳಕೆಗೆಂದೇ ಸಿಲಿಂಡರ್ ಇಲ್ಲಿ ಇಡಲಾಗಿತ್ತು.

ಮಸೀದಿ ಕಾಂಪ್ಲೆಕ್ಸ್ ನಲ್ಲಿಯೇ ಇದ್ದ ಗ್ಯಾಸ್ ಸ್ಟೌ ರಿಪೇರಿ ಅಂಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ನಿಂದ ಬೆಂಕಿ ಆವರಿಸಿಕೊಂಡಿದೆ ಅಂತಲೇ ಹೇಳಲಾಗುತ್ತಿದೆ.

ಸ್ಥಳಕ್ಕೆ ಗೋವಿಂದಪುರ ಪೊಲೀಸರು ಭೇಟಿಕೊಟ್ಟಿದ್ದಾರೆ. ಅಗ್ನಿಶ್ಯಾಮಕ ದಳದ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿ ಆಗಿದೆ.

Edited By : Shivu K
PublicNext

PublicNext

24/12/2021 03:22 pm

Cinque Terre

68.12 K

Cinque Terre

3

ಸಂಬಂಧಿತ ಸುದ್ದಿ