ಬಳ್ಳಾರಿ: ಗೋಶಾಲೆಗೆ ಒಯ್ಯುತ್ತಿದ್ದ ಹುಲ್ಲಿನ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಆವರಿಸಿಕೊಂಡಿರುವ ಘಟನೆ ತಾಲೂಕಿನ ಗುಗ್ಗರಟ್ಟಿ ಗ್ರಾಮದಲ್ಲಿ ನಡೆದಿದೆ.
ಸಿಂಧುವಾಳ ದಿಂದ ಗುಗ್ಗರಟ್ಟಿಲ್ಲಿರುವ ಗೋ ಶಾಲೆಗೆ ಭತ್ತದ ಹುಲ್ಲು ಹೊತ್ತಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ಹತ್ತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.ಇದರಿಂದ ಕೆಲಹೊತ್ತುಗ್ರಾಮದ ಸುತ್ತ ಹೊಗೆ ತುಂಬಿದ ವಾತಾವರಣ ಸೃಷ್ಟಿಯಾಗಿತ್ತು.ಇದರಿಂದ ಕೆಲವು ಹೊತ್ತು ಗ್ರಾಮಸ್ಥರು ಆತಂಕಗೊಂಡಿದ್ದರು.ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
21/12/2021 01:28 pm