ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ನಟ್ಟ ನಡು ರಸ್ತೆಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು-ಪ್ರಯಾಣಿಕರು ಪಾರು

ಬಳ್ಳಾರಿ: ಹೊಸಪೇಟೆಯಿಂದ ಆಂಧ್ರ ಪ್ರದೇಶದ ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರೊಂದು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಇಲ್ಲಿಯ ಮೋತಿ ಸರ್ಕಲ್ ಬಳಿ ನಡೆದಿದೆ.

ಆಂದ್ರ ಪ್ರದೇಶದ ಗುಂತಕಲ್ ನಿಂದ ಹೊಸಪೇಟೆಗೆ ಈ ಸ್ಕಾರ್ಪಿಯೋ ಕಾರ್‌ ನಲ್ಲಿಯೇ ಕುಟುಂಬವೊಂದು ಮದುವೆಗೆ ಬಂದಿತ್ತು. ವಾಪಾಸ್ ಹೋಗುವಾಗ ಸ್ಕಾರ್ಪಿಯೋ ಕಾರ್‌ನ ಶಾರ್ಟ್ ಸರ್ಕ್ಯೂಟ್ ನಿಂದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದು ತಿಳಿಯುತ್ತಿದ್ದಂತೆ ಕಾರ್‌ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಆ ಕೂಡಲೇ ಪ್ರಯಾಣಿಕರೂ ಹೊರ ಬಂದು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಕಾರ್ಪಿಯೋ ಕಾರಂತೂ ಸಂಪೂರ್ಣ ಸುಟ್ಟು ಕರಕಲಾಗಿದೆ.

Edited By : Manjunath H D
PublicNext

PublicNext

20/12/2021 01:04 pm

Cinque Terre

34.38 K

Cinque Terre

0

ಸಂಬಂಧಿತ ಸುದ್ದಿ