ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಭಯ-ಡಿವೈಡರ್ ಗೆ ಗುದ್ದಿದ ಯುವಕನ ಬ್ರೈನ್ ಡೆಡ್

ಬೆಂಗಳೂರು: ಹೆಲ್ಮೇಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ 18 ರ ಯುವಕ ಪೊಲೀಸ್ ರಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್ ಗೆ ಗುದ್ದಿ ಅಪಘಾತಕ್ಕಿಡಾದ ಘಟನೆ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ನಡೆದಿದೆ.

ವಿಜಯ್ ನಗರದ ಪೊಲೀಸರು ವಾಹನ ತಪಾಸಣೆ ನಡೆಸಿದ್ದರು. ಇದೇ ವೇಲೆ ಕೌಶಿಕ್ ಹೆಸರಿನ ಯುವಕ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ. ಆದರೆ ಪೊಲೀಸರನ್ನ ಕಂಡ ಕೂಡಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಯು ಟರ್ನ್ ತೆಗೆದುಕೊಂಡಿದ್ದಾರೆ.ಆದರೆ ಬೈಕ್ ಡಿವೈಡರ್‌ಗೆ ಹೊಡೆದಿದೆ.

ಇದರ ಪರಿಣಾಮ ಯುವಕನಿಗೆ ತಲೆಗೆ ಪೆಟ್ಟು ಬಿದ್ದು ಬ್ರೈನ್ ಡೆಡ್ ಆಗಿದೆ. ಚಿಕಿತ್ಸೆನೂ ಮುಂದುವರೆದಿದೆ.ನಮ್ಮ ಹುಡುಗನನ್ನ ಪೊಲೀಸರು ಬೆನ್ನಟ್ಟಿದ್ದಕ್ಕೇನೆ ಭಯದಲ್ಲಿ ಡಿವೈಡರ್‌ಗೆ ಗುದ್ದಿದ್ದಾನೆ. ಇದಕ್ಕೆ ಪೊಲೀಸರೆ ಕಾರಣ ಎಂದು ಕೌಶಿಕ್ ಪೋಷಕರು ದೂರುತ್ತಿದ್ದಾರೆ.

Edited By : Nagesh Gaonkar
PublicNext

PublicNext

11/12/2021 07:26 pm

Cinque Terre

91.02 K

Cinque Terre

28

ಸಂಬಂಧಿತ ಸುದ್ದಿ