ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಊಟಿಯಲ್ಲಿ ಹಿರಿಯ ರಕ್ಷಣಾಧಿಕಾರಿ ಇದ್ದ ಮಿಲಿಟರಿ ಹೆಲಿಕಾಪ್ಟರ್ ಪತನ-ಮೂವರಿಗೆ ಗಂಭೀರ ಗಾಯ

ವೆಲ್ಲಿಂಗ್ಟನ್:ತಮಿಳು ನಾಡಿನ ಊಟಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನವಾಗಿದೆ. ಇದರಲ್ಲಿ ಮುಖ್ಯ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ,ಸಿಡಿಎಸ್‌ ಜನರಲ್ ಬಿಪಿನ್ ರಾವತ್ ಪತ್ನಿ ಮತ್ತು ಇಬ್ಬರು ಸಿಬ್ಬಂದಿ, ಕುಟುಂಬದ ಸದಸ್ಯರು ಸೇರಿ ಒಟ್ಟು 9 ಮಂದಿ ದೆಹಲಿಯಿಂದ ಸೂಲೂರಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.

ಆದರೆ, ಈ ದುರ್ಘಟನೆಯಿಂದ ಯಾರನ್ನ ರಕ್ಷಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಜನರನ್ನ ಉಳಿಸುವ ಕಾರ್ಯ ಮುಂದುವರೆದಿದೆ.

ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಕೆಲವೇ ಹೊತ್ತಿನಲ್ಲಿಯೆ ಅಪಘಾತ ಸಂಭವಿಸಿದೆ.ಹೆಲಿಕಾಪ್ಟರ್ ಅಪಘಾತ ಕೀಡಾದ ಸ್ಥಳದಲ್ಲಿಬಹಳ ದಟ್ಟವಾದ ಅರಣ್ಯ ಇದೆ.ಆದರೆ ಅಪಘಾತಕ್ಕೆ ಕಾರಣವೇನು ಅನ್ನೋದು ಇನ್ನು ತಿಳಿದು ಬಂದಿಲ್ಲ.

Edited By :
PublicNext

PublicNext

08/12/2021 02:15 pm

Cinque Terre

119.71 K

Cinque Terre

5

ಸಂಬಂಧಿತ ಸುದ್ದಿ