ಕೋಲಾರ : ಕೋಲಾರ ತಾಲೂಕಿನ ಕೆ.ಮಲ್ಲಾಂಡಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ನಾಗರಾಜು (65), ಲಲಿತಮ್ಮ (58) ಮೃತಪಟ್ಟ ದಂಪತಿ.
ಮನೆ ಒಳ ಆವರಣದ ಅಡುಗೆ ಮನೆ ಗೋಡೆ ಕುಸಿತವಾಗಿದೆ. ಇನ್ನು ಗುರುವಾರ ತಡರಾತ್ರಿ ಗೋಡೆ ಕುಸಿದಿರುವ ಸಂಭವವಿದ್ದು ಶುಕ್ರವಾರ ರಾತ್ರಿ ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನ ಹೊರತೆಗೆದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
PublicNext
04/12/2021 12:47 pm