ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದು ಬೆಂಗಾವಲು ವಾಹನ ಅಪಘಾತ : ಕಾಫಿ ತೋಟಕ್ಕೆ ಹಾರಿದ ಬೊಲೇರೋ

ಚಿಕ್ಕಮಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತವಾಗಿದ್ದು,ಸಿಬ್ಬಂದಿಗಳಿಗೆ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ನಡೆದಿದೆ.

ಇನ್ನು ಅಪಘಾತದಲ್ಲಿ ಒಬ್ಬರಿಗೆ ತೀವ್ರವಾದ ಗಾಯವಾಗಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಿದ್ದು, ಡಿಕೆಶಿ ನೆರವಾಗಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ವಾಹನ ಕಾಫಿ ತೋಟದೊಳಗೆ ಬಿದ್ದಿದೆ.

ಶಿವಮೊಗ್ಗಕ್ಕೆ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಈ ಅವಗಢ ಸಂಭವಿಸಿದೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

03/12/2021 06:19 pm

Cinque Terre

100.97 K

Cinque Terre

4

ಸಂಬಂಧಿತ ಸುದ್ದಿ