ಥಾಣೆ (ಮಹಾರಾಷ್ಟ್ರ): ಮದುವೆ ಮನೆಗೆ ಬೆಂಕಿ ಬಿದ್ದರೂ ಆ ಕಡೆ ತಿರುಗಿಯೂ ನೋಡದ ನೆಂಟರು ಡೋಂಟ್ ಕೇರ್ ಎಂಬಂತೆ ನೆಮ್ಮದಿಯಿಂದ ಕುಳಿತು ಊಟ ಮಾಡಿದ್ದಾರೆ. ಇದರ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅಂದ್ ಹಾಗೆ ಈ ಘಟನೆ ಮಹಾರಾಷ್ಟ್ರದ ಥಾಣೆ ಭೀವಂಡಿಯಲ್ಲಿ ಇತ್ತೀಚೆಗಷ್ಟೇ ನಡೆದಿದೆ.
ಈ ವಿಡಿಯೋದಲ್ಲಿ ಮುಂದೆ ಅತಿಥಿಗಳು ಮದುವೆಯ ಭೂರಿ ಭೋಜನ ಸವಿಯುತ್ತಿರುವುದನ್ನು ಕಾಣಬಹುದು. ಅವರ ಹಿಂಬದಿಯಲ್ಲಿಯೇ ಪೆಂಡಾಲ್‌ಗೆ ಬೆಂಕಿ ಹತ್ತಿ ಧಗಧಗನೆ ಉರಿಯುತ್ತಿದೆ. ಬೆಂಕಿಗೆ ಹೆದರಿ ಹಲವರು ಚೀರುತ್ತಿದ್ದಾರೆ. ಅತ್ತಿತ್ತ ಓಡಾಡುತ್ತಿದ್ದಾರೆ. ಆದರೆ ಕೆಲವು ಪುಣ್ಯಾತ್ಮರು ಮಾತ್ರ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಬೆಂಕಿ ಆರಿಸಲು ತರಾತುರಿಯಲ್ಲಿ ಓಡಾಡ್ತಿದ್ದಾರೆ. ನಂತರ ಅಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
PublicNext
30/11/2021 11:39 am