ಕಲಬುರಗಿ : ಮದುವೆಗೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರ ಶವ ಕಲಬುರಗಿ ತಾಲೂಕಿನ ಸಾವಳಗಿ ಬಳಿ ರೈಲು ಹಳಿ ಮೇಲೆ ಪತ್ತೆಯಾಗಿದೆ.
ಡಿಸೆಂಬರ್ 1 ರಂದು ಶ್ರೀನಾಥ್ 25 ಮದುವೆ ನಿಶ್ಚಯವಾಗಿತ್ತು. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ನಿವಾಸಿ ಪೊಲೀಸ್ ಕಾನ್ ಸ್ಟೇಬಲ್ ಶ್ರೀನಾಥ್, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.
ಇಂದು ಮುಂಜಾನೆ ಶ್ರೀನಿವಾಸ್ ಶವ ರೈಲು ಹಳಿ ಮೇಲೆ ಪತ್ತೆಯಾಗಿದೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
27/11/2021 12:06 pm