ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು - ಟಾಟಾಏಸ್ ಮಧ್ಯೆ ಡಿಕ್ಕಿ : ಪ್ರಯಾಣಿಕರು ಪಾರು

ಗದಗ : ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಗದಗ ಜಿಲ್ಲೆ ಅಡವಿಸೋಮಾಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಂದ ಕಾರು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟ ಎಂಬಂತೆ ಗಂಭೀರ ಗಾಯದಿಂದ ಪ್ರಯಾಣಿಕರು ಪಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗವಾಗಿ ಬಂದ ಕಾರು ಟಾಟಾಏಸ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಾಟಾಏಸ್ ನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಇನ್ನು ಧಾರವಾಡದಿಂದ ಹೊಸಪೇಟೆಗೆ ಹೊರಟಿದ್ದ ಕಾರು ಇದಾಗಿದ್ದು ,ಬೆಳದಡಿ ಗ್ರಾಮದಿಂದ ಪಾಪನಾಶಿಗೆ ಹೊರಟಿದ್ದ ಟಾಟಾ ಏಸ್ ಗೆ ಗುದ್ದಿದೆ.

ಟಾಟಾಏಸ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು ಇವರಲ್ಲಿ ನಾಲ್ವರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Edited By : Shivu K
PublicNext

PublicNext

24/11/2021 07:18 pm

Cinque Terre

69.97 K

Cinque Terre

1

ಸಂಬಂಧಿತ ಸುದ್ದಿ