ದಾವಣಗೆರೆ: ನಿಜಕ್ಕೂ ಈ ವಿಡಿಯೋ ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ. ಮೂಕಪ್ರಾಣಿಗಳ ರೋದನ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗುವಂತೆ ಮಾಡುತ್ತೆ.
ಹೌದು. ಇಂಥ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ. ಬಸ್ ವೊಂದು ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದೆ. ಇದನ್ನು ನೋಡಿದ ಉಳಿದ ಹಸುಗಳು ಮೃತ ಪಟ್ಟಿರುವ ಹಸುವಿನ ಬಳಿ ಬಂದು ರೋದಿಸುವ ದೃಶ್ಯ ಜನರು ಮಮ್ಮಲ ಮರುಗುವಂತೆ ಮಾಡಿದೆ.
ಕಾರು ಚಾಲಕ ಡಿಕ್ಕಿ ಹೊಡೆದ ಬಳಿಕ ಹಸುವಿನ ಪರಿಸ್ಥಿತಿ ನೋಡದೇ ಮಾನವೀಯತೆ ಮರೆತು ಹೋಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೃತಪಟ್ಟಿದ್ದ ಹಸುವಿನ ಬಳಿ ಮೂರ್ನಾಲ್ಕು ಹಸುಗಳು ಸುತ್ತಮುತ್ತ ನಿಂತು ನೋವು ವ್ಯಕ್ತಪಡಿಸುವುದನ್ನು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗುತ್ತಿದೆ.
PublicNext
21/11/2021 05:53 pm