ರೋಣ(ಗದಗ ಜಿಲ್ಲೆ): ರಸ್ತೆಯಲ್ಲಿನ ತಗ್ಗು ಗುಂಡಿ ತಪ್ಪಿಸುವ ವೇಳೆ ಆಯ ತಪ್ಪಿ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರೋಣ ತಾಲ್ಲೂಕು ಯಾವಗಲ್ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಲಾರಿ ಕ್ಲೀನರ್‌ಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯಾವಗಲ್ ಗ್ರಾಮದ ಕುಡಿಯುವ ನೀರಿನ ಕೆರೆ ಬಳಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ನೆಲಹಾಸಿನ ಕಡಪ ಕಲ್ಲು ಲೋಡ್ ಮಾಡಲಾಗಿದ್ದ ಈ ಲಾರಿ ಆಂಧ್ರ ಪ್ರದೇಶದಿಂದ ಬೆಳಗಾವಿ ಜಿಲ್ಲೆ ಮುನವಳ್ಳಿಗೆ ತೆರಳುತ್ತಿತ್ತು ಎಂಬ ಮಾಹಿತಿ ಇದೆ.
ಮೃತ ಚಾಲಕ ಆಂದ್ರಪ್ರದೇಶದ ಅನಂತಪೂರ ಜಿಲ್ಲೆ ತಾಡಪತ್ರಿ ತಾಲೂಕಿನ ಗ್ರಾಮದವನು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ರೋಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
20/11/2021 09:50 am