ಹಾವೇರಿ: ಶಾಟ್ ಸರ್ಕ್ಯೂಟ್ ನಿಂದ ವಿದ್ಯುತ್ ಸರಬರಾಜು ಘಟಕದಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿದ ಘಟನೆ ಜಿಲ್ಲೆಯ ಸವಣೂರಿನ ಕೆಇಬಿಯಲ್ಲಿ ನಡೆದಿದೆ.
ಒಮ್ಮೆಲೆ ಕಾಣಿಸಿಕೊಂಡ ಬೆಂಕಿಯಿಂದ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಇನ್ನೂ ಸವಣೂರು ತಾಲೂಕಿನ ಗ್ರಾಮಗಳಿಗೆ ಹಾಗೂ ಸವಣೂರ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
PublicNext
18/11/2021 11:02 pm