ಬೆಳಗಾವಿ: ಹುಟ್ಟು ಹಬ್ಬದ ದಿನ ಆಶೀರ್ವಚನ ನೀಡುವ ವೇಳೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಸಂಗನಬಸವ ಮಹಾಸ್ವಾಮೀಜಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸಂಗನಬಸವ ಮಹಾಸ್ವಾಮೀಜಿ (53) ನವೆಂಬರ್ 6 ರಂದು ತಮ್ಮ ಹುಟ್ಟುಹಬ್ಬವನ್ನ ಆಚರಿಸಿ ಪ್ರವಚನ ನೀಡುತ್ತಿದ್ದರು. ಭಕ್ತರ ಎದರು ಎಂದಿನಂತೆ ಪ್ರವಚನವನ್ನೂ ಅಷ್ಟೇ ಉತ್ಸಾಹದಲ್ಲಿಯೇ ಮಾಡುತ್ತಿದ್ದರು. ಆದರೆ ಕುಳಿತ ಜಾಗದಲ್ಲೇ ಸ್ವಾಮೀಜಿಗಳ ಮಾತು ಮೌನವಾಯಿತು.ಆ ಕ್ಷಣವೇ ಒಂದು ಕಡೆ ಅವರ ಇಡೀ ದೇಹ ಹೀಗೆ ವಾಲಿ ಬಿಡ್ತು.
ಸ್ವಾಮೀಜಿಗಳ ಆಶೀರ್ವಚನ ಕೇಳುತ್ತಿದ್ದ ಭಕ್ತರದಲ್ಲೊಬ್ಬರು ತಮ್ಮ ಮೊಬೈಲ್ ನಲ್ಲಿ ಇದನ್ನ ಚಿತ್ರೀಕರಿಸುತ್ತಿದ್ದರು. ಹಾಗಾಗಿಯೆ ಸ್ವಾಮೀಜಿ ಹೃದಯಾಘಾತದಿಂದ ಜೀವ ಬಿಟ್ಟ ಕ್ಷಣ ವೀಡಿಯೋದಲ್ಲಿ ಕ್ಯಾಪ್ಚರ್ ಆಗಿದೆ. ಆದರೆ ಸ್ವಾಮೀಜಿಗಳು ನವೆಂಬರ್-06 ರಂದು ಹೃದಯಾಘಾತದಿಂದ ನಿಧನ ಹೊಂದಿರೋ ವಿಷಯ ಈಗ ಹೊರ ಬಂದಿದೆ.
PublicNext
16/11/2021 07:19 pm