ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಈಜಲು ಹೋದ ಮೂವರು ಬಾಲಕರು ನೀರು ಪಾಲು

ಈಜಾಡಲು ಹೋಗಿದ್ದ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಜಗಳೂರು ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.

ಪೈಯಾನ್(08) ಅಪಾನ್ (10) ಆಷೀಕ್ (08) ಸಾವನ್ನಪ್ಪಿದ ‌ಮಕ್ಕಳು. ಮಧ್ಯಾಹ್ನ ಮನೆಯಿಂದ‌ ಹೊರಗೆ ಆಟವಾಡಲು ಹೋಗಿದ್ದ ಮಕ್ಕಳು ಸಂಜೆಯಾದರು ಮನೆಗೆ ಬಾರದ ಹಿ‌ನ್ನಲೆ ಪೋಷಕರು ಹುಡುಕಾಡಿದ್ದಾರೆ.

ಕೆರೆಯ ದಡದ ಮೇಲೆ ಬಟ್ಟೆಗಳನ್ನು ಕಂಡು ಹೆದರಿ ಪೋಷಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಮುಳುಗಿದ್ದ ಮಕ್ಕಳ‌ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಮಕ್ಕಳನ್ನು ಕಳಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

14/11/2021 12:26 pm

Cinque Terre

33.26 K

Cinque Terre

0

ಸಂಬಂಧಿತ ಸುದ್ದಿ