ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ, ವೃದ್ಧನಿಗೆ ಗಂಭೀರ ಗಾಯ

ಶಿವಮೊಗ್ಗ: ಮಲೆನಾಡಿನಲ್ಲಿ ದೀಪಾವಳಿ ಬಳಿಕ ಹೋರಿ ಬೆದರಿಸುವ ಸ್ಪರ್ಧೆ ನಡೆಯುವುದು ಸಂಪ್ರದಾಯ.ಆದರೆ ಈ ಬಾರಿ ಆಚರಣೆ ಸಂದರ್ಭ ಅವಘಡ ಸಂಭವಿಸಿದೆ ,ಹೋರಿ ಹಿಡಿಯಲು ಹೋದ ವೃದ್ಧ ಮಹೇಶಪ್ಪ (65) ಅದರ ಕಾಲಿಗೆ ಸಿಕ್ಕಿ ಗಂಭೀರ ಗಾಯಗೊಳಗಾಗಿದ್ದಾರೆ.

ನಗರದ ಹರಮಘಟ್ಟದಲ್ಲಿ ಈ ಘಟನೆ ನಡೆದಿದೆ. ಹೋರಿ ಹಿಡಿಯುವಾಗ ಮಹೇಶಪ್ಪ ಅವರನ್ನು ತಿವಿದು ಅವರನ್ನೇ ತುಳಿದುಕೊಂಡು ಹೋರಿ ಹೋಗಿರುವುದರಿಂದ ಎದೆ ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Edited By : Manjunath H D
PublicNext

PublicNext

14/11/2021 12:05 pm

Cinque Terre

53.19 K

Cinque Terre

3

ಸಂಬಂಧಿತ ಸುದ್ದಿ