ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋ ಲಾರಿ ಮಧ್ಯೆ ಡಿಕ್ಕಿ ಮೂವರ ದುರ್ಮರಣ

ಯಾದಗಿರಿ :ಆಟೋ ಮತ್ತು ಲಾರಿ ಮಧ್ಯೆ ಮುಖಾಮುಖಿಯಾದ ಪರಿಣಾಮ ಮೂವರ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಆಟೋ ಚಾಲಕ,ಆಟೋದಲ್ಲಿದ್ದ ಎರಡುವರೆ ತಿಂಗಳ ಮಗು ಹಾಗೂ ಮಗುವಿನ ಅಜ್ಜ ಮೃತಪಟ್ಟಿದ್ದಾರೆ. ಇನ್ನು ಇದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನು 6 ಜನರಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಗಾಯಾಳುಗಳಿಗೆ ಜಿಲ್ಪಾತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಆಟೋದಲ್ಲಿದ್ದವರು ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡದವರು ಇವರೆಲ್ಲಾ ಮುಂಬೈನಿಂದ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಆಟೋ ಮೂಲಕ ತಾಂಡಾದತ್ತ ಪ್ರಯಾಣ ಬೆಳೆಸಿದ್ದರು. ಅಪಘಾತದಲ್ಲಿ ಕಂಚಗಾರಹಳ್ಳಿ ತಾಂಡ ನಿವಾಸಿ ಆಟೋ ಚಾಲಕ ಲಕ್ಷ್ಮಣ,ಶಹಾಪುರ ತಾಲೂಕಿನ ಹೋತಪೇಟ ತಾಂಡ ನಿವಾಸಿ ಜಯರಾಜ್ ಹಾಗೂ ಮಗು ಸಾವನ್ನಪ್ಪಿದ್ದಾರೆ. ಕಲಬುರ್ಗಿಯಿಂದ ಯಾದಗಿರಿ ಕಡೆಗೆ ಹೋಗುತ್ತಿದ್ದ ಕ್ವಾರಿ ಕಲ್ಲು ತುಂಬಿದ ಲಾರಿ ಇವರನ್ನು ಬಲಿ ಪಡೆದಿರುವುದು ವಿಧಿಯಾಟ. ಈ ಕುರಿತು ಯಾದಗಿರಿ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Edited By : Shivu K
PublicNext

PublicNext

13/11/2021 10:21 am

Cinque Terre

49.74 K

Cinque Terre

0

ಸಂಬಂಧಿತ ಸುದ್ದಿ