ವರದಿ: ಮಲ್ಲಿಕ್ ಬೆಳಗಲಿ
ಶಿವಮೊಗ್ಗ: ಬೆಳಗ್ಗೆ 7 ಗಂಟೆ ಸುಮಾರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನಾಹುತ ಒಂದು ತಪ್ಪಿದೆ. ತಾಳಗುಪ್ಪ - ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲಿನಿಂದ ಇಳಿಯುವಾಗ ವೃದ್ಧ ಮಹಿಳೆ ನಿಯಂತ್ರಣ ತಪ್ಪಿ ಫ್ಲ್ಯಾಟ್ ಫಾರ್ಮ್ ಮೇಲೆಯೇ ಆಯ ತಪ್ಪಿ ಬಿದ್ದಿದ್ದರು! ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸ್ ಹಾಗೂ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ರೈಲ್ವೆ ಪೊಲೀಸ್ ಪಿ.ಸಿ.ಗಳಾದ ಅಣ್ಣಪ್ಪ, ಸಂತೋಷ್, ಆರ್ ಪಿಎಫ್ ಸಿಬ್ಬಂದಿ ಜಗದೀಶ್ ಅವರು, ಹಳಿಯಡಿ ಇನ್ನೇನು ಸಿಲುಕಲಿದ್ದ ವೃದ್ಧೆಯನ್ನು ರಕ್ಷಣೆ ಮಾಡಿದರು. ಇವರ ಜೀವ ರಕ್ಷಣೆ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
11/11/2021 07:40 am