ರಾಜಸ್ಥಾನ : ಅವರೆಲ್ಲಾ ಬೇರೆ ಬೇರೆ ಕೆಲಸದ ನಿಮಿತ್ತ ಬಸ್ ಹತ್ತಿ ಪ್ರಯಾಣಿಸುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು ಎಂದಿನಂತೆ ಹೊರಟ ಖಾಸಗಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬಸ್ ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ.
ಈ ಖಾಸಗಿ ಬಸ್ ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ರಕ್ಷಣಾ ಸಿಬ್ಬಂದಿ 10 ಮೃತದೇಹಗಳನ್ನು ಬಸ್ನಿಂದ ಹೊರತೆಗೆದಿದ್ದಾರೆ. ಈ ಬಸ್ ಬಲೋತ್ರಾದಿಂದ ಹೊರಟಿತ್ತು. ಟ್ಯಾಂಕರ್ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
PublicNext
10/11/2021 01:22 pm