ಚೆನ್ನೈ: ಕೆಲ ದಿನಗಳಿಂದಷ್ಟೇ ಚೆನ್ನೈನ ರಸ್ತೆ ಗುಂಡಿಗೆ ಸವಾರನೋರ್ವ ಬಲಿಯಾಗಿದ್ದ. ಈ ಬೆನ್ನಲ್ಲೇ ಗ್ರೇಟ್ ಚೆನ್ನೈ ಕಾರ್ಪೊರೇಷನ್ ರಸ್ತೆ ಗುಂಡಿ ಮುಚ್ಚಲು ಒಂದು ಸಾವಿರ ಕಾರ್ಮಿಕರನ್ನು ನೇಮಿಸುವ ನಿರ್ಧಾರ ಕೈಗೊಂಡಿತ್ತು. ಈ ಮಧ್ಯೆಯೇ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ದುರಂತವೇ ತಪ್ಪಿದೆ.
ದಂಪತಿ ಹೊರಟಿದ್ದ ಬೈಕ್‌ವೊಂದು ರಸ್ತೆಗುಂಡಿಯಿಂದಾಗಿ ನಿಯಂತ್ರಣ ತಪ್ಪಿದೆ. ಇದೇ ಮಾರ್ಗವಾಗಿ ಬಂದ ಬಸ್ ಬೈಕ್ ಮೇಲಿದ್ದ ದಂಪತಿಗೆ ಅಪ್ಪಳಿಸಿದೆ. ಪರಿಣಾಮ ಬೈಕ್‌ನ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಪವಾಡ ರೀತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
09/11/2021 10:31 pm