ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಆಳಕಡಲ ಬೋಟ್ ಗೆ ಹತ್ತಿಕೊಂಡ ಬೆಂಕಿ!; ಕೋಸ್ಟ್ ಗಾರ್ಡ್ ನಿಂದ 7 ಮೀನುಗಾರರ ರಕ್ಷಣೆ

ಕಾರವಾರ: ಆಳಕಡಲ ಮೀನುಗಾರಿಕೆ ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ಮುಂಜಾವ ಕಾರವಾರ ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ. ಘಟನೆ ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಸಿಬ್ಬಂದಿ ಬೋಟ್ ನಲ್ಲಿದ್ದ ಒಟ್ಟು 7 ಮಂದಿ ಮೀನುಗಾರರನ್ನು ರಕ್ಷಿಸಿ, ದೊಡ್ಡ ದುರಂತ ತಪ್ಪಿಸಿದ್ದಾರೆ.

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ "ವರದಾ ವಿನಾಯಕ" ಬೋಟ್ ನಲ್ಲಿ ಏಕಾಏಕಿ ಶಾರ್ಟ್ ಸರ್ಕಿಟ್ ಉಂಟಾಗಿದ್ದು, ಇದರಿಂದಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಮಲ್ಪೆ ಕಚೇರಿಯಿಂದ ಬಂದ ಮಾಹಿತಿಯಂತೆ ಭಾರತೀಯ ಕೋಸ್ಟ್ ಗಾರ್ಡ್ ಮಂಗಳೂರು ಕಚೇರಿಯಿಂದ ರಾತ್ರಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಬೋಟ್ ನಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

Edited By : Manjunath H D
PublicNext

PublicNext

06/11/2021 11:00 am

Cinque Terre

81.79 K

Cinque Terre

0

ಸಂಬಂಧಿತ ಸುದ್ದಿ