ಚೆನ್ನೈ: ರಸ್ತೆ ಗುಂಡಿಗಳಿಂದಾಗಿ ಅನೇಕ ಸವಾರರು, ಚಾಲಕರು ಜೀವವನ್ನೇ ಕಳೆದುಕೊಂಡ ಬಗ್ಗೆ ವರದಿಯಾಗುತ್ತಲೇ ಇವೆ. ಹೀಗಿದ್ದರೂ ಸರ್ಕಾರ, ಸ್ಥಳೀಯ ಆಡಳಿತ ಮಂಡಳಿ ಮುಂಜಾಗ್ರತೆವಹಿಸದೇ ಒಂದೋ ಎರಡೋ ಸಾವಿನ ಬಳಿಕ ಕಾರ್ಯಪ್ರವೃತ್ತವಾಗುತ್ತಿದೆ. ಇಂಥದ್ದೇ ಘಟನೆಯೊಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಹೌದು. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಚೆನ್ನೈ ನಗರದಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚಲು 1,000ಕ್ಕೂ ಹೆಚ್ಚು ಕಾರ್ಮಿಕರನ್ನು ನಿಯೋಜಿಸಲು ನಿರ್ಧರಿಸಿದೆ. ಎಲ್ಲ 15 ವಲಯಗಳಿಗೆ ಗುಂಡಿ ಮುಚ್ಚಲು ತಲಾ 10 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಇದಕ್ಕೆ ಕಾರಣ ಸೋಮವಾರವಾದ ನಡೆದ ಭೀಕರ ರಸ್ತೆ ಅಪಘಾತ. ಅಣ್ಣಾ ಸಲೈ ರಸ್ತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದ 32 ವರ್ಷದ ವ್ಯಕ್ತಿಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿ ನಿಯಂತ್ರಣ ತಪ್ಪಿ ಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬಸ್ ಹರಿದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬಳಿಕ ಎಚ್ಚೆತ್ತ ಚೆನ್ನೈ ಕಾರ್ಪೊರೇಷನ್ ರಸ್ತೆ ಗುಂಡಿ ಮುಚ್ಚಲು ಮುಂದಾಗಿದೆ.
PublicNext
03/11/2021 01:04 pm