ಗದಗ: ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮಕ್ತುಂಪುರ ಬಳಿ ನಡೆದಿದೆ.
ಕೋಟೆಪ್ಪ ಮಗಟರ್(24) ಎಂಬಾತನೇ ಮೃತ ಯುವಕ. ಈತ ಬಿಡನಾಳ ಗ್ರಾಮದ ನಿವಾಸಿಯಾಗಿದ್ದು ಇಂದು ಬೆಳ್ಳಂಬೆಳಿಗ್ಗೆ ಬಿಡನಾಳ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಹೊರಟಿದ್ದ ಎಂಬ ಮಾಹಿತಿ ಇದೆ. ಮಾರ್ಗ ಮಧ್ಯೆ ಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/11/2021 09:57 am