ಕೇರಳ: ಸಾವು ಹೇಳಿ ಕೇಳಿ ಬರೋದಿಲ್ಲ. ಬಂದರೂ ಅದು ಗೊತ್ತೇ ಆಗೋದಿಲ್ಲ. ಕೇಳರದ 'ಮಿಸ್ ಕೇರಳ' ಅನ್ಸಿ ಕಬೀರ್ ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ಗೊತ್ತು ಇತ್ತೇ ಅನ್ನೋ ಅನುಮಾನ ಶುರು ಆಗಿದೆ. ಈ ಅನುಮಾನ ಹುಟ್ಟಲು ಕಾರಣ, ಅನ್ಸಿ ಹಾಕಿದ್ದ ಆ ಇನ್‌ಸ್ಟಾ ಪೋಸ್ಟ್. ಏನ್ ಅದು ಬನ್ನಿ ಹೇಳ್ತಿವಿ.
Its time to go ಹೌದು. ಇದೇ ಸಾಲುಗಳನ್ನ ಬರೆದು ಅನ್ಸಿ ಕಬೀರ್ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಸಾಲುಗಳನ್ನ ಅದ್ಯಾವ ಅರ್ಥದಲ್ಲಿ ಬರೆದಿದ್ದರೋ ಏನೋ. ನಿನ್ನೆ ನಡೆದ ಭೀಕರಣ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಲ್ಲಿ ಅನ್ಸಿ ಕಬೀರ್ ಹಾಗೂ ರನ್ನರಪ್ ಅಂಜನಾ ಶಾಜುನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗಿದ್ದ ಇನ್ನಿಬ್ಬರು ಗಂಭೀರವಾಗಿಯೇ ಗಾಯಗೊಂಡಿದ್ದಾರೆ.ಆದರೆ ಈಗ ಅನ್ಸಿ ಬರೆದ ಆ ಸಾಲುಗಳ ಹೆಚ್ಚು ಚರ್ಚೆ ಆಗುತ್ತಿದ್ದು, ಅನ್ಸಿಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು ಅಂತಲೇ ಮಾತನಾಡಿಕೊಳ್ಳುತ್ತಿದ್ದಾರೆ.
PublicNext
01/11/2021 04:02 pm