ಬೆಳಗಾವಿ: ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಓರ್ವನ ಮೃತ ದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃತ ದೇಹಕ್ಕಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಮುಂದುವರೆದಿದೆ.
ಬೆಳ್ಳಂ ಬೆಳಿಗ್ಗೆ ಕೆರೆ ಕಡೆಗೆ ಹೋಗಿದ್ದ ಇಬ್ಬರು ಕಾಲು ಜಾರಿ ನೀರಲ್ಲಿ ಮುಳುಗಿದ್ದಾರೆ. ಘಟನೆ ಎಂ ಕೆ ಹುಬ್ಬಳ್ಳಿ ಉಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
31/10/2021 02:29 pm