ಯಲ್ಲಾಪುರ: ಯಲ್ಲಾಪುರ ತಾಲೂಕಿನ ಅರ್ತೀಬೈಲ್ ನ ಇಡಗುಂದಿ ಬಳಿ ಅಂಕೋಲಾ- ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸುಮಾರು 5.30ಕ್ಕೆ ಕೆಮಿಕಲ್ ಟ್ಯಾಂಕರ್ ಒಂದು ಸ್ಪೋಟ ಗೊಂಡಿದೆ. ಈ ಹಿನ್ನಲೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಸ್ಫೋಟದ ತೀವ್ರತೆಗೆ ಬೆಂಕಿ ಸಾಕಷ್ಟು ದೂರ ಹಬ್ಬಿಕೊಂಡಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದ್ದಾರೆ. ಘಟನೆಯ ಪರಿಣಾಮ 300-400 ಮೀಟರ್ ದೂರಗಳಷ್ಟು ದಟ್ಟ ಹೊಗೆ ಆವರಿಸಿದೆ.
PublicNext
13/10/2021 09:40 am