ದಾವಣಗೆರೆ: ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಲಾರಿ ಚಾಲಕ ಹುಚ್ಚಾಟ ಮಾಡಿದ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ತ್ಯಾವಣಗಿ-ಚಿರಡೋಣಿ ಸೇತುವೆಯಲ್ಲಿ ಲಾರಿ ಪಲ್ಟಿಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಸೇತುವೆಯ ಮೇಲೆ ಹರಿಯುವ ನೀರಿನಲ್ಲಿ ಚಾಲಕನೊಬ್ಬ ಹುಚ್ಚಾಟ ಪ್ರದರ್ಶನ ಮಾಡಿದ ಹಿನ್ನಲೆಯಲ್ಲಿ ಲಾರಿಯೊಂದು ಪಲ್ಟಿಯಾಗಿದೆ.
ಸೂಳೆಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ತ್ಯಾವಣಗಿ- ಚಿರಡೋಣಿ ಮಧ್ಯದ ಹಳ್ಳ ತುಂಬಿ ಹರಿಯುತ್ತಿದ್ದು, ಸೇತುವೆ ಮೇಲೆಯೇ ನೀರು ಹರಿಯುತ್ತಿದೆ. ಅಲ್ಲದೇ, ರಸ್ತೆ ಸಂಪರ್ಕ ಕೂಡ ಕಡಿತವಾಗಿದೆ. ಆದರೆ, ರಸ್ತೆ ಮೇಲೆ ನೀರು ಹರಿಯುತ್ತಿರುವಾಗಲೂ ಚಾಲಕ ಬೇಜವಾಬ್ದಾರಿಯಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದರಿಂದ ಲಾರಿ ಪಲ್ಟಿಯಾಗಿದೆ. ನೀರಿನ ರಭಸಕ್ಕೆ ಲಾರಿ ಮುಂದಕ್ಕೆ ಹೋಗಲಾರದೆ ಅಲ್ಲಿಯೇ ಪಲ್ಟಿಯಾಗಿದೆ. ಭಾರಿ ಅನಾಹುತ ತಪ್ಪಿದ್ದು, ಘಟನೆಯಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಪಡಿತರ ರಾಗಿಯನ್ನ ಹೊತ್ತು ತ್ಯಾವಣಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಆದರೆ, ಸೇತುವೆ ಮೇಲೆ ಪಲ್ಟಿಯಾಗಿದೆ. ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
PublicNext
06/10/2021 03:46 pm