ಬಾಗಲಕೋಟೆ : ಶಾರ್ಟ್ ಸರ್ಕಿಟ್ ನಿಂದ ಎರಡು ಟ್ರಾನ್ಸ್ ಫಾರ್ಮಗಳು ಸ್ಪೋಟಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ನಡೆದಿದೆ. ಇನ್ನು ಹೊತ್ತಿ ಉರಿದ ವಿದ್ಯುತ್ ಟ್ರಾನ್ಸ್ ಫಾರ್ಮಗಳಿಂದ ಬಾನೆತ್ತರಕ್ಕೆ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದೆ.
ಹೆಸ್ಕಾಂ 220ಕೆವಿ ಸ್ಟೇಷನ್ ನಲ್ಲಿ ಈ ಅಗ್ನಿ ಅವಘಡ ನಡೆದಿದ್ದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿ ನಂತರ ದುರಸ್ಥಿ ಕಾಯ೯ ನಡೆಸಿದ್ದಾರೆ. 20 ಜನ ಸಿಬ್ಬಂದಿಗಳು ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಮಹಾಲಿಂಗಪೂರ ಪಟ್ಟಣದಾದ್ಯಂತ ವಿದ್ಯುತ್ ಸಂಪಕ೯ ಕಡಿತಗೊಂಡಿದೆ.
PublicNext
04/10/2021 06:45 pm