ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಜಲು ಹೋಗಿದ್ದ ಬಾಲಕ ಶವವಾಗಿ ಪತ್ತೆ

ಕೊಪ್ಪಳ: ಐತಿಹಾಸಿಕ ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.ಸತತ ನಾಲ್ಕು ಗಂಟೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನೆಡಸಿದ್ರೂ ಶವ ಸಿಕ್ಕಿರಲಿಲ್ಲ ನಂತರ ಸ್ಥಳೀಯ ಈಜುಗಾರ ಚನ್ನಬಸಪ್ಪ ಹಡಪದ್ ಬಾಲಕನ ಶವ ಪತ್ತೆ ಮಾಡಿದ್ದಾ‌ನೆ.ಕೊಪ್ಪಳದ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸುಮಾರು ಐದುನೂರು ವರ್ಷದ ಇತಿಹಾಸ ಹೊಂದಿರುವ ಸೊಸೆಯಂದಿರ ಬಾವಿ ಇದಾಗಿದ್ದು

ಮೃತ ಬಾಲಕ ಬಸವರಾಜ ಒಂಬತ್ತನೆ ತರಗತಿ ಓದುತಿದ್ದ. ಮಧ್ಯಾಹ್ನ ೧೨ ಗಂಟೆಗೆ ಸ್ನೇಹಿತರ ಜೊತೆ ಈಜಾಡಲು ತೆರಳಿದ್ದವನು ಶವವಾಗಿ ವಾಪಸ್ಸು ಬಂದಿದ್ದಾನೆ. ಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

Edited By : Nagesh Gaonkar
PublicNext

PublicNext

04/10/2021 06:35 pm

Cinque Terre

67.28 K

Cinque Terre

0

ಸಂಬಂಧಿತ ಸುದ್ದಿ