ಬೆಳಗಾವಿ (ಚಿಕ್ಕೋಡಿ): ವೇಗವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ನಾಕಾದ ಕೌಂಟರ್ ಮೇಲೆ ಎರಗಿದ ಘಟನೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಸಮೀಪದ ಟೋಲ್ ನಾಕಾ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಂ.ಸ್ಯಾಂಡ್ ತುಂಬಿದ ಮಿನಿಲಾರಿ ನಿಪ್ಪಾಣಿ- ಮಹಾಲಿಂಗಪೂರ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಸಾಗುತ್ತಿತ್ತು. ಚಿಂಚಣಿ ಸಮೀಪದ ಟೋಲ್ ನಾಕಾ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸ್ಥಳದಲ್ಲಿದ್ದ ಕೌಂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಮುನ್ಸೂಚನೆ ಅರಿತ ವ್ಯಕ್ತಿಯೊಬ್ಬರು ಕೌಂಟರ್ ಕಟ್ಟೆಯಿಂದ ಜಿಗಿದು ಪಾರಾಗಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/10/2021 08:48 pm