ಬೆಂಗಳೂರು : ನಿನ್ನೆ ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿದುರಂತ ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸಿದೆ. ಕುಳಿತಲ್ಲೇ ಮಗಳು ಸುಟ್ಟು ಕರಕಲಾದರೆ ನಿಂತಲೇ ತಾಯಿ ಬೆಂದುಹೋದ ಹೋದ ಘಟನೆ ನಿಜಕ್ಕೂ ಭಯಾನಕವಾಗಿತ್ತು. ಎಲ್ಲರ ಮುಂದರೆಯೇ ನನ್ನನ್ನು ಕಾಪಾಡಿ..ಕಾಪಾಡಿ ಎಂದು ಅಂಗಲಾಚಿದರು ಬಾಲಕನಿಯಲ್ಲಿ ನಿಂತ ಮಹಿಳೆಯನ್ನು ಕಾಪಾಡಲು ಸಾಧ್ಯವಾಗಿಲ್ಲ.
ಅಗ್ನಿ ಅವಘಡದ ವಿಚಾರವಾಗಿ ಮಾತನಾಡಿದ ಅರಗ ಜ್ಞಾನೇಂದ್ರ, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಈ ಪ್ರಕರಣ ನಮಗೆ ಸಾಕಷ್ಟು ವಿಚಾರಗಳ ಬಗ್ಗೆ ಕಣ್ತೆರೆಯುವಂತೆ ಮಾಡಿದೆ. ಸಿಲಿಂಡರ್ ಬ್ಲಾಸ್ಟ್ ನಿಂದ ಈ ಅವಘಡ ಸಂಭವಿಸಿಲ್ಲ. ಫ್ಲಾಟ್ ನಲ್ಲಿದ್ದ ಎರಡೂ ಸಿಲಿಂಡರ್ ಗಳು ಸರಿಯಾಗಿವೆ. ಹೀಗಾಗಿ ಅಗ್ನಿ ದುರಂತಕ್ಕೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಗ್ನಿಶಾಮಕ ದಳದ ಕಾರ್ಯದ ಬಗ್ಗೆಯೂ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಅಪಾರ್ಟ್ ಮೆಂಟ್ ಗಳು ಗಗನಚುಂಬಿ ಆಗುತ್ತಲೇ ಹೋಗ್ತಿವೆ. ಹೀಗಾಗಿ ಈಗಾಗಲೇ 50 ಮೀಟರ್ ಎತ್ತರದ ಲಿಫ್ಟ್ ಖರೀದಿ ಮಾಡಿದ್ದಾರೆ. 90 ಮೀಟರ್ ಉದ್ದದ ಲಿಫ್ಟ್ ಖರೀದಿ ಆಗಿದ್ದು ಇನ್ನೇನು ನಮ್ಮ ಕೈ ಸೇರಬೇಕಿದೆ. ಎತ್ತರದ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಆ ಪ್ರದೇಶವನ್ನು ತಲುಪಲು ಈ ಲಿಫ್ಟ್ ಗಳು ಸಹಾಯ ಮಾಡುತ್ತವೆ ಎಂದು ಹೇಳಿದರು.
ಅಪಾರ್ಟ್ ಮೆಂಟ್ ನ ಮುಂದೆ ರಸ್ತೆ ಸರಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಅಗ್ನಿಶಾಮಕ ದಳ ವಾಹನಕ್ಕೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗೋದಿಲ್ಲ. ಇನ್ಮುಂದೆ ರಸ್ತೆ ಮಾರ್ಗ ಸರಿಯಾಗಿ ಇರುವಲ್ಲಿ ಮಾತ್ರ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
PublicNext
22/09/2021 01:09 pm