ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿ ತಪ್ಪಿದ ರೈಲು,ನದಿಗೆ ಉರುಳಿದ ಗೂಡ್ಸ್ ಬೋಗಿಗಳು, ಗೋಧಿ ನೀರುಪಾಲು

ಭುವನೇಶ್ವರ : ಈಸ್ಟ್ ಕೋಸ್ಟ್ ರೈಲ್ವೆ ವಿಭಾಗದ ಗೂಡ್ಸ್ ರೈಲಿನ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಗುಲ್–ತಾಲ್ ಚೇರ್ ಮಾರ್ಗದಲ್ಲಿ ಗೋಧಿ ಸಾಗಿಸುತ್ತಿದ್ದ ರೈಲಿನ ಆರು ಬೋಗಿಗಳು ಮುಂಜಾನೆ 2.30ರ ಸುಮಾರಿಗೆ ಹಳಿ ತಪ್ಪಿ ನದಿಗೆ ಉರುಳಿವೆ. ಆದರೆ, ರೈಲಿನ ಎಂಜಿನ್ ಹಳಿಯ ಮೇಲೆ ಇದ್ದಿದ್ದರಿಂದ, ಲೋಕೊ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ‘ ಎಂದು ಅವರು ಹೇಳಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಫಿರೋಜ್ಪುರ ದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿದ್ದ ಈ ಗೂಡ್ಸ್ ರೈಲಿನ ಬೋಗಿಗಳು ನಂದಿರಾ ಸೇತುವೆಯ ಮೇಲೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಂತರ, ಈಸ್ಟ್ಕೋಸ್ಟ್ ರೈಲ್ವೆ ವಿಭಾಗ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳನ್ನು ರದ್ದುಗೊಳಿಸಿತು. ಎಂಟು ರೈಲುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿತು.

Edited By : Nirmala Aralikatti
PublicNext

PublicNext

14/09/2021 12:19 pm

Cinque Terre

43.44 K

Cinque Terre

0

ಸಂಬಂಧಿತ ಸುದ್ದಿ