ಶಮ್ಲಿ: ಉತ್ತರ ಪ್ರದೇಶ ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಪತ್ನಿ ಸುಷ್ಮಾ ದೇವಿ (50) ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಎರಡನೆಯ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಶಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಕೈರಾಣಾ ನಗರದಲ್ಲಿರುವ ತಮ್ಮ ನಿವಾಸದ ತಾರಸಿಯ ಮೇಲೆ ಸುಷ್ಮಾ ದೇವಿ ಸಂಜೆ ತೆರಳಿದ್ದರು. ಆದರೆ ಅಲ್ಲಿದ್ದ ಮಂಗಗಳ ಗುಂಪೊಂದು ಅವರನ್ನು ಸುತ್ತುವರಿದು ದಾಳಿ ನಡೆಸಲು ಮುಂದಾಗಿವೆ. ಕೋತಿಗಳ ಆಕ್ರಮಣ ಕಂಡು ಭಯಗೊಂಡ ಸುಷ್ಮಾ ದೇವಿ ತಾರಸಿಯಿಂದ ಕೆಳಕ್ಕೆ ಜಿಗಿದಿದ್ದಾರೆ.
ಮಹಡಿಯಿಂದ ಬಿದ್ದ ಸುಷ್ಮಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ.
ಘಟನೆಯ ನಡೆದಾಗ ಅವರ ಪತಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ನಾಯಕರಾಗಿರುವ ಅನಿಲ್, 2014ರ ಮೇ ತಿಂಗಳಲ್ಲಿ ಕೈರಾಣಾ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಉತ್ತರ ಪ್ರದೇಶದ ಪಶ್ಚಿಮದ ವಿವಿಧ ಜಿಲ್ಲೆಗಳಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ.
PublicNext
09/09/2021 04:59 pm