ಬಾಗಲಕೋಟೆ: ಕಾರು ಅಪಘಾತದಲ್ಲಿ ಅತ್ತಿಗೆ ಸೇರಿ ನವದಂಪತಿ ಅಸುನೀಗಿದ್ದಾರೆ. ಆಂಧ್ರದ ನೆಲ್ಲೂರಿನ ಬಳಿ ನಡೆದ ಈ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಮೂವರು ಮೃತಪಟ್ಟಿದ್ದಾರೆ.
ಸದ್ದಾಂ ರಾಜೇಸಾಬ್ ಸೊನ್ನದ ಜಾತಗಾರ(27), ಇವರ ಪತ್ನಿ ಸಲೀಮಾ ಸದ್ದಾಂ (25) ಹಾಗೂ ಇವರ ಅತ್ತಿಗೆ ರೇಷ್ಮಾ ಇಸ್ಮಾಯಿಲ್(26) ಮೃತ ದುರ್ದೈವಿಗಳಾಗಿದ್ದಾರೆ.
ಇವರೆಲ್ಲ ತಮ್ಮ ಸಂಬಂಧಿಕರ ಮದುವೆಗಾಗಿ ಆಂಧ್ರದ ಕಡಪಾಗೆ ಹೋಗಿದ್ದರು. ಮದುವೆ ಮುಗಿಸಿ ವಾಪಸ್ ಬರುವಾಗ ನೆಲ್ಲೂರು ಬಳಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ.
PublicNext
08/08/2021 03:56 pm