ಜೈಪುರ: ಆಧುನಿಕತೆಯ ಕಾಲದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತೀಯಾಗಿ ಬಳಸುತ್ತಿದ್ದೇವೆ. ಇದು ಒಂದೆಡೇ ಅನಿವಾರ್ಯವು ಆಗಿದೆ.
ಸದ್ಯ ಬ್ಲೂಟೂತ್ ಹೆಡ್ ಫೋನ್ ಸ್ಪೋಟಗೊಂಡ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಉದಯಪುರಿಯ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾಕೇಶ್ ಕುಮಾರ್ ನಗರ ಎಂಬಾತ ತನ್ನ ನಿವಾಸದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
‘ರಾಕೇಶ್ ಕುಮಾರ್ ಹೆಡ್ ಫೋನ್ ಚಾರ್ಜ್ ಗಿಟ್ಟು ಅದನ್ನು ಬಳಕೆ ಮಾಡುತ್ತಿದ್ದಾಗ ಸ್ಪೋಟಗೊಂಡಿದೆ. ಈ ವೇಳೆ ಪ್ರಜ್ಞೆ ತಪ್ಪಿದ್ದ ರಾಕೇಶ್ ಅವರನ್ನು ಸಿದ್ಧಿ ವಿನಾಯಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಫೋಟದಿಂದಾಗಿ ಅವರ ಕಿವಿಗೆ ಗಂಭೀರ ಗಾಯಗಳಾಗಿತ್ತು. ‘ರಾಕೇಶ್ ಬಹುಶಃ ಹೃದಯಾಘಾತದಿಂದ ಸಾವಿಗೀಡಾಗಿರಬಹುದು’ ಎಂದು ಡಾ. ಎಲ್.ಎನ್. ರುಂದ್ಲಾ ಹೇಳಿದರು.
PublicNext
07/08/2021 02:03 pm