ವಾಷಿಂಗ್ಟನ್: ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಗೊತ್ತೇ ಆಗುವುದಿಲ್ಲ. ಆದರೆ ಸಾವಿನ ಸಮೀಪ ಹೋಗಿ ಬಂದವರು ಪುನರ್ಜನ್ಮ ಪಡೆದಂತೆಯೇ ಸರಿ. ಇದೇ ರೀತಿ 231 ವಿಮಾನ ಪ್ರಯಾಣಿಕರು ವಿಮಾನ ಅಪಘಾತದಲ್ಲಿ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಯುನೈಟೆಡ್ ಏರ್ ಲೈನ್ಸ್ ವಿಮಾನವು 231 ಮಂದಿ ಪ್ರಯಾಣಿಕರು ಮತ್ತು 10 ಜನ ಸಿಬ್ಬಂದಿಯೊಂಗೆ ಡೆನ್ವರ್‌ನಿಂದ ಹೊನಲುಲುಗೆ ಹೊರಟಿತ್ತು. ಮಾರ್ಗ ಮಧ್ಯದಲ್ಲಿ ಏಕಾಏಕಿ ವಿಮಾನದ ಇಂಜಿನ್‍ನಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸಮಯದಲ್ಲಿ ಆದ ಘಟನೆಯಿಂದಾಗಿ ವಿಮಾನದಲ್ಲಿದ್ದ ಎಲ್ಲರೂ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಪೈಲಟ್ ಸಮಯಪ್ರಜ್ಞೆಯಿಂದ ಎಲ್ಲರ ಜೀವವೂ ಉಳಿದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
21/02/2021 07:03 pm