ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದ ಮೂರು ಅಂಗಡಿಗಳು ಧಗ ಧಗ ಹೊತ್ತಿ ಉರಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಚನ್ನಗಿರಿ - ಶಿವಮೊಗ್ಗ ರಸ್ತೆಯಲ್ಲಿನ ಕುಷನ್ ಅಂಗಡಿ, ಗ್ಯಾರೇಜ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಗಳು ಬೆಂಕಿಗಾಹುತಿಯಾಗಿವೆ. ಗ್ಯಾರೇಜ್‌ನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಫರ್ನೀಚರ್ಸ್ ಗಳ ಮಾರಾಟ ಹಾಗೂ ತಯಾರಿಕೆ ಮಾಡಲಾಗುತಿತ್ತು. ಗ್ಯಾರೇಜ್ ನಲ್ಲಿ ಹಳೆಯ ವಾಹನಗಳು ಹಾಗೂ ಬಿಡಿ ಭಾಗಗಳನ್ನು ಇಡಲಾಗಿತ್ತು. ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಗ್ಯಾರೇಜ್‌ನಲ್ಲಿ. ಬಳಿಕ ಬೆಂಕಿಯ ಕೆನ್ನಾಲಗಿ ಪಕ್ಕದ ಅಂಗಡಿಗಳಿಗೂ ತಗುಲಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
18/02/2021 08:44 pm