ದಾವಣಗೆರೆ: ದಟ್ಟ ಮಂಜು ಕವಿದ ಕಾರಣ ಚಾಲಕನಿಗೆ ದಾರಿ ಕಾಣದೇ ಲಾರಿ ಪಲ್ಟಿಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಕ್ರಾಸ್ ಬಳಿ ನಡೆದಿದೆ.
ಮೈಸೂರಿನಿಂದ ಗೋವಾಕ್ಕೆ ಜ್ಯೂಸ್ ಪಾಕೆಟ್ ಗಳನ್ನು ಹೊತ್ತ ಲಾರಿಯು ಹೋಗುತಿತ್ತು. ಬೆಳ್ಳಂಬೆಳಿಗ್ಗೆ 4.30ರ ಸುಮಾರಿಗೆ ಬೆಂಕಿಕೆರೆ ತಿರುವು ಬಳಿ ಬರುತ್ತಿದ್ದಾಗ ದಟ್ಟ ಮಂಜು ಆವರಿಸಿತ್ತು. ಭಾರೀ ಇಬ್ಬನಿ ಬಿದ್ದ ಕಾರಣ ಲಾರಿಯ ಗ್ಲಾಸ್ ಮಬ್ಬಾಗಿದೆ.
ಆಗ ಚಾಲಕನಿಗೆ ದಾರಿ ಕಾಣಲಿಲ್ಲ. ಈ ವೇಳೆ ತಿರುವಿನಲ್ಲಿ ರಸ್ತೆ ಗೊತ್ತಾಗದೇ ಗುಂಡಿಗೆ ಲಾರಿ ಬಿದ್ದಿದೆ. ಲಾರಿಯೊಳಗಿದ್ದ ಜೂಸ್ ಬಾಟಲ್ ಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲ ಗ್ರಾಮಸ್ಥರು ಜ್ಯೂಸ್ ಬಾಟಲ್ ಗಳನ್ನು ತೆಗೆದುಕೊಂಡು ಹೋದ ಘಟನೆಯೂ ನಡೆಯಿತು. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
16/02/2021 10:25 pm