ದಾವಣಗೆರೆ: ಚಲಿಸುತ್ತಿದ್ದ ಕಾರ್ ನ ಟೈರ್ ಬಸ್ಟ್ ಆಗಿ ಪಲ್ಟಿ ಹೊಡೆದಿರುವ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದ ಹೊರಭಾಗದ ರಾಷ್ಡ್ರೀಯ ಹೆದ್ದಾರಿ 4ರ ಶಿವ ಡಾಬಾದ ಬಳಿ ನಡೆದಿದೆ.
ಕಾರು ಹುಬ್ಬಳ್ಳಿಯಿಂದ ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ಹೊರಟಿತ್ತು. ಈ ವೇಳೆ ಹೆಬ್ಬಾಳದ ಶಿವ ಡಾಬಾ ಬಳಿ ಏಕಾಏಕಿ ಕಾರ್ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರ್ ನಲ್ಲಿ ಚಾಲಕ ಒಬ್ಬರೇ ಇದ್ದು, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳಿಕ ಸ್ಥಳೀಯರು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
PublicNext
12/02/2021 02:20 pm