ಶಿವಮೊಗ್ಗ: ಗುರುವಾರ ರಾತ್ರಿ ಎಲ್ಲರೂ ಮಲಗುವ ಹೊತ್ತಿಗೆ ಶಿವಮೊಗ್ಗದ ಹುಣಸೋಡು ಬಳಿ ಭೂ ಕಂಪಿಸುವ ಮಟ್ಟಿಗೆ ಸ್ಫೋಟವೊಂದು ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಭೂಮಿ ನಡುಗಿದೆ,ಮನೆಯ ಕಿಟಕಿ ಗಾಜುಗಳು ಒಡೆದು ಹೋಗಿವೆ ಏಕಾಏಕಿ ಭಾರೀ ಶಬ್ದಕ್ಕೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.
ಹೌದು ಸಿಎಂ ತವರು ಜಿಲ್ಲೆಯಲ್ಲಿ ಅಕ್ರಮ ಕ್ರಷರ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಈ ಮಾಫಿಯಾದಿಂದ ಸಂಭವಿಸಿದ ಸ್ಫೋಟದಲ್ಲಿ ನಿನ್ನೆ 15ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೇ ಸ್ಫೋಟಗೊಂಡಿದ್ದು ಸ್ಫೋಟದಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತದಿಂದ ಜನ ಬೆದರಿ ಬೆಂಡಾಗಿ ಹೋಗಿದ್ದಾರೆ.ಅಕ್ರಮ ಕ್ರಷರ್ ನಿಲ್ಲಿಸಿ, ನಮ್ಮನ್ನು ಕಾಪಾಡಿ. ನಮ್ಮನ್ನು ಹಾಗೂ ನಮ್ಮ ಬದುಕನ್ನು ಕಾಪಾಡಿ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ. ಸತ್ತವರು ಮನುಷ್ಯರಲ್ವಾ ಎಂದು ಪ್ರಶ್ನಿಸುವ ಮೂಲಕ ಪೊಲೀಸರ ವಿರುದ್ಧವೂ ಜನ ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದ ಸುತ್ತಮುತ್ತ ಪ್ರದೇಶಗಳಾದ ಅಬ್ಬಲಗೆರೆ ಪಂಚಾಯತಿ, ಕಲ್ಲುಗಂಗೂರು ಗ್ರಾಮ, ಹುಣಸೋಡು, ಬಸವನಗಂಗೂರು, ಮತ್ತೋಡು, ಗೆಜ್ಜೆನಹಳ್ಳಿ ಎಲ್ಲಿ ನೋಡಿದ್ರೂ ಅಕ್ರಮ ಕ್ರಷರ್ ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಲ್ಲಿನ ಇಡೀ ಪರಿಸರ ಸಂಪೂರ್ಣ ಸರ್ವನಾಶವಾಗಿದೆ. ಸದ್ಯ ನಡೆದ ಈ ಘನಘೋರ ದುರಂತಕ್ಕೆ ಯಾರು ಹೊಣೆ? ಜಲ್ಲಿ ಕ್ರಷರ್ ಗಳ ಹಿಂದೆ ಜಿಲ್ಲೆಯ ಪ್ರಭಾವಿಗಳ ಪಾತ್ರವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ 15 ಮಂದಿ ಕಾರ್ಮಿಕರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದುರಂತ ಸಂಬಂಧ ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಪ್ರತಿಕ್ರಿಯಿಸಿ, ಶಿವಮೊಗ್ಗದ ಅಬ್ಬಲಗೆರೆ ಬಳಿ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ ತುಂಬಿದ ಲಾರಿ ಸ್ಫೋಟ ಆಗಿರುವ ಬಗ್ಗೆ ಶಂಕೆಯಿದೆ.
ಸದ್ಯಕ್ಕೆ ಲಾರಿಯೊಂದು ಸುಟ್ಟಿದೆ ಕೆಲವೊಂದು ಮೃತದೇಹಗಳು ಪತ್ತೆಯಾಗಿವೆ. ಬೆಂಗಳೂರಿನಿಂದ ವಿಧಿವಿಜ್ಞಾನ ತಂಡ ಹಾಗೂ ಸಿಆರ್ ಎಫ್ ತಂಡ ಆಗಮಿಸಲಿದೆ. ಬಳಿಕ ವಷ್ಟೇ ಮಾಹಿತಿ ನೀಡಲು ಸಾಧ್ಯವೆಂದು ಹೇಳಿದ್ದರು.
PublicNext
22/01/2021 10:38 am