ಲಕ್ನೋ: ಸ್ಮಶಾನದಲ್ಲಿನ ಕಟ್ಟಡದ ಮೇಲ್ಛಾವಣಿ ಕುಸಿದು ಜನ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಮುರಾದ್ ನಗರದಲ್ಲಿ ನಡೆದಿದೆ.
ಅವಘಡದಲ್ಲಿ 23 ಜನ ದುರ್ಮರಣ ಹೊಂದಿದ್ದಾರೆ.
ಇನ್ನು, ಘಟನೆಯಲ್ಲಿ 38 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.
ರಾಮ ಧನ್ ಎಂಬುವ ವ್ಯಕ್ತಿಯ ಅಂತ್ಯಕ್ರಿಯೆಗೆ ಆತನ ಸಂಬಂಧಿಕರು ಸ್ಮಶಾನಕ್ಕೆ ಆಗಮಿಸಿದ್ದರು.
ಶವಸಂಸ್ಕಾರದ ವೇಳೆ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ಸ್ಮಶಾನದಲ್ಲಿದ್ದ ಕಟ್ಟಡದ ಕೆಳಗೆ ನಿಂತಿದ್ದಾಗ ಮೇಲ್ಚಾವಣಿ ಕುಸಿದಿದೆ.
PublicNext
04/01/2021 09:05 am