ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಹರ ಸಮೀಪ ಭೀಕರ ಅಪಘಾತ: ಸ್ಥಳದಲ್ಲೇ ದಂಪತಿ ಸಾವು

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ಸಮೀಪ ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ದಂಪತಿ ದಾರುಣ ಸಾವಿಗೀಡಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ನಿವಾಸಿಗಳಾದ ಸಿದ್ದಮ್ಮ ಮತ್ತು ಹಾಲೇಶಪ್ಪ ದಂಪತಿ ಬೈಕ್ ಮೇಲೆ ತೆರಳುತ್ತಿದ್ದರು. ರಾಜನಹಳ್ಳಿಯ ಕೆರೆ ಏತ ನೀರಾವರಿ ಸಮೀಪದ ಸೇತುವೆ ಮೇಲೆ ಬೈಕ್ ಚಲಿಸುತ್ತಿತ್ತು. ಹಿಂಬದಿಯಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಹಾಲೇಶಪ್ಪ (52)ಅವರ ತಲೆಗೆ ಪೆಟ್ಟಾಗಿ ಮೃತಪಟ್ಟರೆ, ಸಿದ್ದಮ್ಮ (45) ಅವರು ಸೇತುವೆ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಸಿದ್ದಮ್ಮ ಹಾಗೂ ಹಾಲೇಶಪ್ಪ ದಂಪತಿ ಬೈಕ್ ಮೂಲಕ ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಹರಿಹರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

01/01/2021 04:49 pm

Cinque Terre

74.75 K

Cinque Terre

2

ಸಂಬಂಧಿತ ಸುದ್ದಿ