ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ ಕಟ್ಟಡ ದುರಂತ ಸಾವಿನ ಸಂಖ್ಯೆ 41ಕ್ಕೆ ಏರಿಕೆ

ಮುಂಬೈ : ಸೆ.21 ರಂದು ಮಹಾರಾಷ್ಟ್ರದ ಭಿವಾಂಡಿಯಲ್ಲಿರುವ 36 ವರ್ಷಗಳ ಹಳೆಯ ಕಟ್ಟಡವೊಂದು ನೆಲಸಮವಾಗಿದೆ.

ಈ ಕಟ್ಟಡದಲ್ಲಿ ವಾಸವಿದ್ದವರ ಪೈಕಿ 41 ಜನ ಕಟ್ಟಡ ದುರಂತದಲ್ಲಿ ಸಾವನಪ್ಪಿದ್ದಾರೆ.

ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 48 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿದೆ.

ಇನ್ನೂ ಈ ಕಟ್ಟಡದ ಮಾಲೀಕ ಸಯ್ಯದ್ ಅಹ್ಮದ್ ಜಿಲಾನಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ದುರಂತ ಸಂಭವಿಸಿದ ದಿನದಿಂದ ಕಟ್ಟಡ ಮಾಲೀಕ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಭಿವಾಂಡಿಯಲ್ಲಿದ್ದ 3 ಅಂತಸ್ತಿನ ಕಟ್ಟಡವು ಅಸ್ಥಿರಗೊಂಡಿದ್ದು, ವಾಸಕ್ಕೆ ಸುರಕ್ಷಿತವಾಗಿಲ್ಲ. ಸಾಧ್ಯವಾದಷ್ಟು ಬೇಗ ಅಲ್ಲಿಂದ ಮನೆಗಳನ್ನು ಖಾಲಿ ಮಾಡುವಂತೆ ಮೊದಲೇ ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿಗೊಳಿಸಿತ್ತು.

ಇದನ್ನು ಲಘುವಾಗಿ ತೆಗೆದುಕೊಂಡು, ಮನೆ ಖಾಲಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಇಂಥದೊಂದು ದುರಂತ ಸಂಭವಿಸಿದೆ ಎಂದು ಕಮಿಷನರ್ ಪಂಕಜ್ ಆಶಿಯಾ ಹೇಳಿದ್ದಾರೆ.

Edited By : Nirmala Aralikatti
PublicNext

PublicNext

24/09/2020 09:21 am

Cinque Terre

66.09 K

Cinque Terre

1

ಸಂಬಂಧಿತ ಸುದ್ದಿ